Sunday, March 20, 2016

Hindu

ವೇದಪುರಾಣಗಳಲ್ಲಿ ಹಿಂದೂಪದ

ವೇದಪುರಾಣಗಳಲ್ಲಿ ಹಿಂದೂಪದ
ಹಿಂದೂ" ಎಂಬ ಶಬ್ದವನ್ನು ವಿದೇಶಿಯರು ನೀಡಿದ್ದೇ..?" ಹಿಂದೂ" ಶಬ್ದದ ಉಲ್ಲೇಖ ನಮ್ಮವೇದಪುರಾಣ,ಶಾಸ್ತ್ರಗಳಲ್ಲಿಲ್ಲವೇ...?
ಇದು ನಿಜವೇ...?"ಎಂಬ ಅನುಮಾನಗಳು ನಮ್ಮನ್ನು ಕಾಡಿರಬಹುದು.ಆ ಎಲ್ಲಾ ಅನುಮಾನಗಳನ್ನು ಪರಿಹರಿಸುವ ಯತ್ನ ನಮ್ಮದು.

"ಹಿಂದೂ" ಎಂಬ ಪದ ಅರಬಿಭಾಷೆಯದ್ದಲ್ಲ, ಇರಾನಿನ ಕೊಡುಗೆಯಲ್ಲ. ಇರಾನಿಗಳು,ಮುಸ್ಲಿಂಮರು ಭಾರತಕ್ಕೆ ಬರುವ ಮುನ್ನವೇ "ಹಿಂದೂ" ಎಂಬ ಶಬ್ದ ಬಳಕೆಯಲ್ಲಿತ್ತು. ಸನಾತನ ಧರ್ಮದ ಅನುಯಾಯಿಗಳನ್ನು ಹಿಂದೂಗಳೆಂದು ಕರೆಯಲಾಗುತ್ತಿತ್ತು.ಅದಕ್ಕೆ ಕೆಲವೊಂದು ಉದಾಹರಣೆಗಳನ್ನು ನೋಡೋಣ.

"ಮೇರುತಂತ್ರ" ಶೈವ ದರ್ಶನಕ್ಕೆ ಸಂಬಂಧಿಸಿದ ಗ್ರಂಥ,ಅದರಲ್ಲಿ..

"ಹೀನಂ ಚ ದೂಷ್ಯತ್ಯೇವ ಹಿಂದೂರಿತ್ಯುಚ್ಯತೇ" ಎಂದು "ಹಿಂದೂ" ಶಬ್ದದ ಉಲ್ಲೇಖವಿದೆ.ಅಂದರೆ ಯಾರು ಅಜ್ಞಾನತೆ ಹಾಗೂ ಹೀನತೆಯನ್ನು ತ್ಯಾಗ ಮಾಡಿದ್ದಾರೋ ಅವರು ಹಿಂದೂಗಳು.

ಇದೇ ವಾಕ್ಯವನ್ನು "ಶಬ್ದ ಕಲ್ಪದ್ರುಮ" ಎಂಬ ಗ್ರಂಥದಲ್ಲೂ ಕಾಣಬಹುದು.

"ಪಾರಿಜಾತ ಹರಣ" ಎಂಬ ಗ್ರಂಥದಲ್ಲೂ ಸಹ "ಹಿಂದೂ’ ಶಬ್ದದ ಉಲ್ಲೇಖವಿದೆ. "ಹಿನಸ್ತಿ ತಪಸಾ ಪಾಪಾಂ ದೈಹಿಕಾಂT ದುಷ್ಟಮಾನಸಾನ್ | ಹೇತಿಭಿಃ ಶತ್ರುವರ್ಗಂ ಚ ಸ ಹಿಂದುರಭಿಧೀಯತೆ ||"

"ಮಾಧವ ದಿಗ್ವಿಜಯ" ಎಂಬ ಗ್ರಂಥದಲ್ಲೂ ಸಹ ಹಿಂದೂ ಶಬ್ದವನ್ನು ಕಾಣಬಹುದು..

"ಓಂಕಾರಮೂಲಮಂತ್ರಾಢ್ಯ ಪುನರ್ಜನ್ಮ ದೃಢಾಶಯಃ | ಗೋಭಕ್ತೋ ಭಾರತಗುರೂ ಹಿಂದುಹಿಂಸನದೂಷಕಃ ||" ಅಂದರೆ,ಓಂಕಾರಮೂಲಮಂತ್ರವನ್ನು ಹೊಂದಿರುವ,ಕರ್ಮದ ಮೇಲೆ ವಿಶ್ವಾಸವಿರುವ,ಪುನರ್ಜನ್ಮದ ನಂಬಿಕೆಯಿರುವ,
ಗೋಭಕ್ತರಾಗಿರುವ,
ಪಾಪಕರ್ಮಗಳನ್ನು ದೂರವೇ ಇರಿಸುವವವರು ಹಿಂದೂಗಳು.

ಋಗ್ವೇದದಲ್ಲಿ (8-2-41) "ವಿವಹಿಂದು" ಎಂಬ ರಾಜನ ವರ್ಣನೆಯಿದೆ. ಆತ 46000 ಗೋವುಗಳನ್ನು ದಾನ ಮಾಡಿದ್ದ. ವಿವಹಿಂದು ಬಹಳ ಪರಾಕ್ರಮಿಯೂ ಆಗಿದ್ದ. ಆತನದು ಹಿಂದೂ ವಂಶವಾಗಿತ್ತು.ಇಲ್ಲಿಯೂ ಸಹ "ಹಿಂದು" ಎಂಬ ಶಬ್ದವನ್ನು ಕಾಣಬಹುದು.

ಋಗ್ವೇದದಲ್ಲಿ "ಸೈಂಧವ" ಎಂಬ ಋಷಿಯ ಉಲ್ಲೇಖವಿದೆ. ಅನಂತರ ಅದೇ ಋಷಿ "ಹೈಂದಾವ" ಅಥವಾ" ಹಿಂದವ" ಎಂಬ ಹೆಸರಿನಿಂದ ಪ್ರಚಲಿತನಾಗಿದ್ದ. ಇದು "ಹಿಂದೂ" ಶಬ್ದಕ್ಕೆ ಸಾಮೀಪ್ಯದ ಪದ.

ಋಗ್ವೇದದ ಬೃಹಸ್ಪತೀ ಅಗ್ಯಮದಲ್ಲಿ ಹಿಂದೂ ಪದ..

"ಹಿಮಾಲಯಂ ಸಮಾರಭ್ಯ ಯಾವತ್ ಇಂದುಸರೋವರೇ | ತಂ ದೇವನಿರ್ಮಿತಂ ದೇಶಂ ಹಿಂದುಸ್ಥಾನಂ ಪ್ರಚಕ್ಷ್ಯತೇ ||"

ಹಿಮಾಲಯದಿಂದ ಇಂದೂಸರೋವರದವರೆಗಿರುವ,ಸಾಕ್ಷಾತ್ ಭಗವಂತನೇ ನಿರ್ಮಿಸಿರುವ ಈ ದೇಶವನ್ನು "ಹಿಂದೂಸ್ಥಾನ" ಎಂದು ಕರೆಯುತ್ತಾರೆ.

ಈ ಎಲ್ಲಾ ಆಧಾರಗಳಿಂದ "ಹಿಂದೂ’ ಅಥವಾ "ಹಿಂದೂಸ್ಥಾನ" ಪರಕೀಯರು ನೀಡಿದ ಪದವಲ್ಲ. ನಮ್ಮ ಸನಾತನ ಸಂಸ್ಕೃತಿಯ ಪದಗಳೇ.ಸಂಶೋಧಿಸುತ್ತಾ ಹೋದರೆ ಇನ್ನೂ ಅನೇಕ ಆಧಾರಗಳು ಸಿಗಬಹುದು. ನಮ್ಮ ವೇದ-ಶಾಸ್ತ್ರ-ಪುರಾಣಗಳಲ್ಲೇ "ಹಿಂದೂ" ಪದ ಉಲ್ಲೇಖಿತವಾಗಿದೆ.
ಆಧಾರವಿಲ್ಲದೇ ಮಾತಾಡುವವರ ಅವೇವೇಕಿತನಕ್ಕೆ ನಾವು ತಲೆಗೆಡಿಸಿಕೊಳ್ಳಬೇಕಿಲ್ಲ.

ಲೋಕಾಃ ಸಮಸ್ತಾಃ ಸುಖಿನೋ ಭವಂತು.

No comments: